Back  Home     

 

 

ಮಾಲಿಕೆ-04

ದಿನಾಂಕ 11/03/2011
ಚಿತ್ತದ ಚಿತ್ತಾರಗಳು
-ಶ್ರೀ ಚಂದ್ರಹಾಸ ತಾಳೂಕರ

ದಿನಾಂಕ 11/03/2011 ರಂದು ಚಿತ್ತದ ಚಿತ್ತಾರಗಳು ಎಂಬ ಕಾರ್ಯಕ್ರಮ ವನ್ನು ವಿಕಾಸ ಸೌಧದ ಗ್ರಂಥಾಲಯ (ಕೊಠಡಿ ಸಂ. 21) ರಲ್ಲಿ ಏರ್ಪಡಿಸಲಾಗಿತ್ತು. ಸಿಆಸುಇ ಯಲ್ಲಿ ಶಾಖಾಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿರುವ ಶ್ರೀ ಚಂದ್ರಹಾಸ ತಾಳೂಕರ ರವರು ರಚಿಸಿದ ಸುಮಾರು 43 ಕೃತಿಗಳ ಪ್ರದರ್ಶನ ಇದಾಗಿತ್ತು. ಸಚಿವಾಲಯದ 400 ಕ್ಕೂ ಹೆಚ್ಚು ಸಹೋದ್ಯೋಗಿಗಳು ಈ ಪ್ರದರ್ಶನವನ್ನು ವೀಕ್ಷಿಸಿದರು. ಡಾ: ಎಂ.ಟಿ. ರೇಜು, ಉಪ ಕಾರ್ಯದರ್ಶಿ, ಸಿಆಸುಇ (ಸೇವೆಗಳು) ರವರು ಶ್ರೀ ಚಂದ್ರಹಾಸ ತಾಳೂಕರರವಿಗೆ ಶಾಲು ಹೊದಿಸಿ  ನೆನಪಿನ ಕಾಣಿಕೆ ನೀಡುವ ಮೂಲಕ ಗೌರವಿಸಿದರು. ಗ್ರಾ. ಅ. ಮತ್ತು ಪಂ.ರಾ. ಪ್ರಧಾನ ಕಾರ್ಯದರ್ಶಿಯವರಾದ ಶ್ರೀ ಪಿ. ರವಿಕುಮಾರ್ ರವರು ಚಿತ್ರ ಪ್ರದರ್ಶನ ವೀಕ್ಷಿಸಿದ ಗಣ್ಯರಲ್ಲಿ ಒಬ್ಬರಾಗಿದ್ದಾರೆ.